ದಿನಾಂಕ 24/10/26 ರಿಂದ ದಿನಾಂಕ 30/10/26 ರವರೆಗೆ ಪುರದಕೊಪ್ಪಲು ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಲೂಕು, ಮಂಡ್ಯ ಜಿಲ್ಲೆ. ಇಲ್ಲಿ ಸುಮಾರು 7 ದಿನಗಳ ವಿಶೇಷ ವಾಸ್ತವ್ಯ ಶ್ರಮದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಿ ಮುಗಿಸಿ ಬಂದಿದೆ. ಈ ವಿಶೇಷ ಶ್ರಮದಾನ ಶಿಬಿರದಲ್ಲಿ ಉದ್ಘಾಟನಾ ಸಮಾರಂಭವನ್ನು ದಿನಾಂಕ 25/10/26 ರಂದು ಹಮ್ಮಿಕೊಂಡಿದ್ದು ಶ್ರೀಯುತ ಕ್ಯಾತೇಗೌಡ ಎಸ್. ಪಿ., ಎನ್. ಎಸ್. ಎಸ್. ಅಧಿಕಾರಿಗಳು ಉದ್ಘಾಟಿಸಿದರು ಹಾಗೂ ಇವರ ಜೊತೆಗೆ ಡಾ|| ಅಶ್ವಿನಿ ಮೇರಿ ಸಿಗೋಸ್, ಹಾಗೂ ಕನ್ನಡ ಉಪನ್ಯಾಸಕರಾದ ಶ್ರೀಯುತ ಶಿವರಾಜು ಮತ್ತು ಶ್ರೀಯುತ ಮಹೇಶ್ ಬಾಬು ಹಾಗೂ ಕಾರ್ಯಕ್ರಮ ಅಧಿಕಾರಿಯಾದ ಶ್ರೀಯುತ ಶರೀಫ್ ಗೌಡ – ಬಿ.ಎಂ ಹಾಗೂ ಸಹ ಕಾರ್ಯಕ್ರಮ ಅಧಿಕಾರಿಯಾದ ಪವಿತ್ರ. ಎಂ.ಪಿ ಹಾಗೂ ಅನನ್ಯ ರವರು ಉಪಸ್ಥಿತರಿದ್ದರು. ಹಮ್ಮಿಕೊಂಡ ದಿನನಿತ್ಯ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಹಳ್ಳಿಯ ಜನರಿಗೆ. ಉಪಯುಕ್ತವಾಗುವಂತೆ ನಶಾ ಮುಕ್ತ ಭಾರತದ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ರೈತರಿಗೆ ಡಾ|| ಸನತ್ ಕುಮಾರ್ ಕೃಷಿ ವಿಜ್ಞಾನಿಯವರ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಡಾ|| ಸೆಬಿ ಜಾನ್ ಮತ್ತು ರಜಿನಿ ತಂಡದವರಿಂದ ಉಚಿತ ದಂತ ತಪಾಸಣೆ ಮತ್ತು ಪ್ರಾಥಮಿಕ ಆರೋಗ್ಯ ಶಿಬಿರ, ಉಚಿತ ಕಣ್ಣು ತಪಾಸಣೆ ಹಾಗೂ CSB Bank ಸಿಬ್ಬಂದಿ ರವರಿಂದ ಜನರಿಗೆ ಬ್ಯಾಂಕ್‌ಗಳ ಮಾಹಿತಿ ಹಾಗೂ ರೇಷ್ಮೆ ಸಂಸ್ಥೆಯವರಿಂದ ಜನರಿಗೆ ಉಚಿತ ಮಾಹಿತಿ ವಿತರಣೆಯನ್ನು ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಮ್ಮಿಕೊಳ್ಳಲಾಯಿತು. ಇದೇ 7 ದಿನಗಳ ಸಹ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಸದರಿ ಎಲ್ಲಾ ಸಹಕಾರವನ್ನು ನೀಡಿದರು.
NSS Camp :- ಶ್ರೀ ಬಸವೇಶ್ವರ ಸಮುದಾಯ ಭವನ ಪುರದಕೊಪ್ಪಲು.